Skip to content
eBook Charts
US
ಮಿಂಚುಳ್ಳಿ / Minchulli

ಮಿಂಚುಳ್ಳಿ / Minchulli

KP Poornachandra Tejaswi

$3.99

Buy on Amazon View on Apple Books

Prefer it in print? See every format on Amazon →

Price on Apple Books. Amazon’s price may differ.

Read a lot? Try Kindle+ * · Compare subscriptions

Published
Genres
Fiction & Literature

Description

About the book

ಬೇಸಿಗೆ ಬರುತ್ತಲೂ ಹಳ್ಳದ ನೀರು ಇಂಗುತ್ತಿದುದರಿಂದ ಗುಂಡಿಗಳಲ್ಲಿ ಮೀನುಗಳು ಶೇಖರವಾಗುತ್ತಿದ್ದಂತೆಯೇ ಅಲ್ಲಿಗೆ ಬೆಳ್ಳಕ್ಕಿಗಳೂ, ಗದ್ದೆಗೊರವಗಳು, ಹುಂಡುಕೊಳಿಗಳೂ ಬಟ್ಟಲಲ್ಲಿಟ್ಟ ತಿಂಡಿಯಂತೆ ಸುಲಭಕ್ಕೆ ಸಿಕ್ಕುವ ಮೀನಿನ ಆಸೆಗಾಗಿ ಆಗಮಿಸುತ್ತಿದ್ದವು. ಮಾರ ಆಗೀಗ ಹೊಂಡ ತೊಣಕಿ ಮೀನು ಹಿಡಿಯುತ್ತಿದುದರಿಂದ ಅವನಿಗೆ ಇವನ್ನೆಲ್ಲಾ ಕಂಡರೆ ಕೋಪಬರುತ್ತಿತ್ತು. "ಏನು ನಮ್ಮ ಹಳ್ಳಕ್ಕೆ ನೂರೆಂಟು ಜನ ಮಿಂಡರು!" ಎಂದು ಕಲ್ಲು ಎಸೆದು ಅವನ್ನೆಲ್ಲಾ ಓಡಿಸುತ್ತಿದ್ದ. ಹಾಗೆ ಬೈಯ್ಯುವಾಗ ಅವನ ತಲೆಗೆ ತಾನು ನೂರೊಂಭತ್ತನೆಯವನು ಎನ್ನುವುದು ಹೊಳೆಯುತ್ತಿರಲ್ಲಿಲ್ಲ.

About the author

“ಜಗತ್ತಿನಲ್ಲಿ ಯಾವುದೂ ಜಡವಲ್ಲ” – ಕೆ.ಪಿ.ಪೂರ್ಣಚಂದ್ರ ತೇಜಸ್ವಿ

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ಕನ್ನಡ ಸಾಹಿತ್ಯ-ಸಂಸ್ಕೃತಿ ಚಿಂತನೆಯ ಹೊಸದಿಗಂತಗಳ ಬಾಗಿಲುಗಳನ್ನು ತೆರೆಸಿದ ಲೇಖಕ. ಕ್ರಿಯಾಶೀಲತೆ ಮತ್ತು ಚಲನಶೀಲತೆ ಅವರ ಸಾಹಿತ್ಯದ ಕೆಲವು ಆಶಯ. ವ್ಯಕ್ತಿ ವಿಶಿಷ್ಠ ಸಿದ್ಧಾಂತದಿಂದ ಜೀವಕೇಂದ್ರಿತ ಜಗತ್ತಿನ ಶೋಧದ ಕಡೆಗೆ ಅವರ ಸಾಹಿತ್ಯ ವಿಕಾಸವಾಗುತ್ತಾ ಬೆಳೆಯುತ್ತದೆ. ತಮ್ಮ ಜೀವನಾನುಭವಗಳನ್ನೇ ಕಥನಗಳನ್ನಾಗಿಸಿ, ಅದಕ್ಕೆ ಹೊಸ ವೈಚಾರಿಕತೆ, ದಾರ್ಶನಿಕತೆ ಹಾಗೂ ವುಜ್ವಲ ಕಾಂತಿಯನ್ನು ದೊರಕಿಸಿಕೊಟ್ಟ ಕನ್ನಡದ ಅಪರೂಪದ ಲೇಖಕ ಪೂರ್ಣಚಂದ್ರ ತೇಜಸ್ವಿ ಅವರು.

ಅವರ ಬದುಕು ಸರಳ ಹಾಗೂ ನೇರ ವ್ಯಕ್ತಿತ್ವದಿಂದ ಕೂಡಿದ್ದಾಗಿತ್ತು. ಹಾಗಾಗಿಯೇ ತೇಜಸ್ವಿ ಅವರ ಬರಹ, ಆಸಕ್ತಿ, ಅವರ ಬದುಕಿನ ರೀತಿ, ಬದುಕಿನ ಬಗೆಗೆ ಮನಸೋತು; ಆಕರ್ಶಿತರಾಗಿ; ಅವರಂತೆ ಬದುಕಬೇಕು; ಎಂದು ಹಂಬಲಿಸುವವರು ಅಸಂಖ್ಯ.

ಇಪ್ಪತ್ತನೇ ಶತಮಾನದ ಅತ್ಯಂತ ಯಶಸ್ವಿ ಹಾಗೂ ಪ್ರಭಾವಿ ಲೇಖಕರಲ್ಲಿ ಒಬ್ಬರಾಗಿದ್ದ ತೇಜಸ್ವಿ ಬದುಕ್ಕಿದ್ದು ಕೇವಲ ಅರವತ್ತೊಂಭತ್ತು (69‍) ವರ್ಷ್ ಗಳು ಮಾತ್ರ [1938-2007]. ಅವರ ಸಾವು ಅಸಂಖ್ಯ ಸಾಹಿತ್ಯ ಪೇಮಿಗಳನ್ನು ಕೊರಗಿನಲ್ಲಿಟ್ಟಿದೆ. ಆದರೆ ಅವರ ಬದುಕು, ಸಾಹಿತ್ಯ ಕೃಷಿ ನಿರಂತರವಾಗಿ ನಮ್ಮ ಬದುಕಿನ ಭಾಗವಾಗುತ್ತಿದೆ.

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಅಭಿವ್ಯಕ್ತಿ ವಿಧಾನ, ಸ್ವರೂಪ, ಕಥನ ಕ್ರಮ, ಭಾಷೆಯ ಬಳಕೆ, ಹೊಸ ನುಡಿಗಟ್ಟುಗಳ ಶೋಧ; ತಮ್ಮ ಎಲ್ಲ ಬರಹಗಳಲ್ಲಿ ನಿರಂತರವಾಗಿ ಅನ್ವೇಷಣೆಗೆ ಒಳಪಟ್ಟಿದ್ದವು ಎಂಬುದಕ್ಕೆ ಅವರ ಅಗಾಧ ಸಾಹಿತ್ಯ ಕೃತಿಗಳೇ ಸಾಕ್ಷಿಯಾಗಿವೆ. ಅನುವಾದ, ಚಿತ್ರಕಲೆ, ಫೋಟೋಗ್ರಫಿ, ಸಿತಾರ್ ವಾದನ, ಸಂಗೀತ, ಮೀನು ಶಿಕಾರಿ, ಬೇಟೆ, ಪಕ್ಷಿ ವೀಕ್ಷಣೆ, ಕೃಷಿ, ಯಂತ್ರ ರಿಪೇರಿ, ಚಾರಣ, ಕಂಪ್ಯೂಟರ್ ಬಳಕೆ ಹಾಗೂ ಅದರಿಂದ ಪುಸ್ತಕ ಪಬ್ಲಿಷಿಂಗ್, ಅಡುಗೆ... ಹೀಗೆ ಹತ್ತು-ಹಲವು ಅವರ ಆಸಕ್ತಿ, ಅಭಿರುಚಿಗಳಾಗಿದ್ದವು. ಹಾಗಾಗಿ “ತೇಜಸ್ವಿ” ಎಂದರೆ ಒಂದು ವಿಸ್ಮಯ, ನಿಗೂಢ, ಮಾಯಾಲೋಕ!

* * *