ಹುಡುಕಾಟ
$3.99
Buy on Amazon View on Apple BooksPrefer it in print? See every format on Amazon →
Price on Apple Books. Amazon’s price may differ.
- Published
- Genres
- Fiction & Literature
Description
About the Book
ಈ ಶತಮಾನದ ಸಂಧ್ಯೆ ಹತ್ತಿರ ಹತ್ತಿರವಾಗುತ್ತಿದೆ. ಈ ಶತಮಾನದ ವಿಶೇಷವೇನೆಂದರೆ ಕ್ರಿಸ್ತಹುಟ್ಟಿದ ತರುವಾಯ ಶತಮಾನದೊಂದಿಗೆ ಮುಗಿಯುತ್ತಿರುವ ಎದಡನೇ ಮಿಲಿನಿಯಮ್. ಈ ಶತಮಾನದ ಅಂತ್ಯದಲ್ಲಿ ನಿಂತು ಇಪ್ಪತ್ತನೇ ಶತಮಾನವನ್ನು ಪರಿಭಾವಿಸಿದಾಗ ಕಂಡ, ಕೇಳಿದ, ಓದಿದ, ನೋಡಿದ ಕುತೂಹಲಕರ ರೋಮಾಂಚಕರ ವಿಚಾರಗಳನ್ನು ತೇಜಸ್ವಿಯವರು ನೆನಪಿನ ಲಹರಿಯ ಅಲೆದಾಟಕ್ಕನುಸಾರವಾಗಿ ಇಲ್ಲಿ ದಾಖಲಿಸುತ್ತಾ ಹೋಗಿದ್ದಾರೆ. ಅವರು ಇಲ್ಲಿ ಪ್ರಸ್ತುತ ಪಡಿಸುವ ವಿಷಯಗಳ ಬೇರುಗಳೂ ಬಿಳಲುಗಳೂ ಈ ಶತಮಾನವನ್ನೂ ಮೀರಿ ಮಿಲನಿಯಮ್ ವರೆಗೂ ವ್ಯಾಪಿಸಿರುವುದರಿಂದ ಈ ಸರಣಿಯ ‘ಹುಡುಕಾಟ’ ಕೃತಿಯನ್ನು ಮಿಲನಿಯಮ್ -1 ಎಂದು ಕರೆದಿದ್ದೇವೆ. ಈ ಸರಣಿಯನ್ನು ಶತಮಾನದ ಅಂತ್ಯದವರೆಗೂ ಪ್ರತಿ ತಿಂಗಳೂ ತರುವ ಆಸೆ ನಮ್ಮದು.
About the Author
“ಜಗತ್ತಿನಲ್ಲಿ ಯಾವುದೂ ಜಡವಲ್ಲ” – ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ಕನ್ನಡ ಸಾಹಿತ್ಯ-ಸಂಸ್ಕೃತಿ ಚಿಂತನೆಯ ಹೊಸದಿಗಂತಗಳ ಬಾಗಿಲುಗಳನ್ನು ತೆರೆಸಿದ ಲೇಖಕ. ಕ್ರಿಯಾಶೀಲತೆ ಮತ್ತು ಚಲನಶೀಲತೆ ಅವರ ಸಾಹಿತ್ಯದ ಕೆಲವು ಆಶಯ. ವ್ಯಕ್ತಿ ವಿಶಿಷ್ಠ ಸಿದ್ಧಾಂತದಿಂದ ಜೀವಕೇಂದ್ರಿತ ಜಗತ್ತಿನ ಶೋಧದ ಕಡೆಗೆ ಅವರ ಸಾಹಿತ್ಯ ವಿಕಾಸವಾಗುತ್ತಾ ಬೆಳೆಯುತ್ತದೆ. ತಮ್ಮ ಜೀವನಾನುಭವಗಳನ್ನೇ ಕಥನಗಳನ್ನಾಗಿಸಿ, ಅದಕ್ಕೆ ಹೊಸ ವೈಚಾರಿಕತೆ, ದಾರ್ಶನಿಕತೆ ಹಾಗೂ ವುಜ್ವಲ ಕಾಂತಿಯನ್ನು ದೊರಕಿಸಿಕೊಟ್ಟ ಕನ್ನಡದ ಅಪರೂಪದ ಲೇಖಕ ಪೂರ್ಣಚಂದ್ರ ತೇಜಸ್ವಿ ಅವರು.
ಅವರ ಬದುಕು ಸರಳ ಹಾಗೂ ನೇರ ವ್ಯಕ್ತಿತ್ವದಿಂದ ಕೂಡಿದ್ದಾಗಿತ್ತು. ಹಾಗಾಗಿಯೇ ತೇಜಸ್ವಿ ಅವರ ಬರಹ, ಆಸಕ್ತಿ, ಅವರ ಬದುಕಿನ ರೀತಿ, ಬದುಕಿನ ಬಗೆಗೆ ಮನಸೋತು; ಆಕರ್ಶಿತರಾಗಿ; ಅವರಂತೆ ಬದುಕಬೇಕು; ಎಂದು ಹಂಬಲಿಸುವವರು ಅಸಂಖ್ಯ.
ಇಪ್ಪತ್ತನೇ ಶತಮಾನದ ಅತ್ಯಂತ ಯಶಸ್ವಿ ಹಾಗೂ ಪ್ರಭಾವಿ ಲೇಖಕರಲ್ಲಿ ಒಬ್ಬರಾಗಿದ್ದ ತೇಜಸ್ವಿ ಬದುಕ್ಕಿದ್ದು ಕೇವಲ ಅರವತ್ತೊಂಭತ್ತು (69) ವರ್ಷ್ ಗಳು ಮಾತ್ರ [1938-2007]. ಅವರ ಸಾವು ಅಸಂಖ್ಯ ಸಾಹಿತ್ಯ ಪೇಮಿಗಳನ್ನು ಕೊರಗಿನಲ್ಲಿಟ್ಟಿದೆ. ಆದರೆ ಅವರ ಬದುಕು, ಸಾಹಿತ್ಯ ಕೃಷಿ ನಿರಂತರವಾಗಿ ನಮ್ಮ ಬದುಕಿನ ಭಾಗವಾಗುತ್ತಿದೆ.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಅಭಿವ್ಯಕ್ತಿ ವಿಧಾನ, ಸ್ವರೂಪ, ಕಥನ ಕ್ರಮ, ಭಾಷೆಯ ಬಳಕೆ, ಹೊಸ ನುಡಿಗಟ್ಟುಗಳ ಶೋಧ; ತಮ್ಮ ಎಲ್ಲ ಬರಹಗಳಲ್ಲಿ ನಿರಂತರವಾಗಿ ಅನ್ವೇಷಣೆಗೆ ಒಳಪಟ್ಟಿದ್ದವು ಎಂಬುದಕ್ಕೆ ಅವರ ಅಗಾಧ ಸಾಹಿತ್ಯ ಕೃತಿಗಳೇ ಸಾಕ್ಷಿಯಾಗಿವೆ. ಅನುವಾದ, ಚಿತ್ರಕಲೆ, ಫೋಟೋಗ್ರಫಿ, ಸಿತಾರ್ ವಾದನ, ಸಂಗೀತ, ಮೀನು ಶಿಕಾರಿ, ಬೇಟೆ, ಪಕ್ಷಿ ವೀಕ್ಷಣೆ, ಕೃಷಿ, ಯಂತ್ರ ರಿಪೇರಿ, ಚಾರಣ, ಕಂಪ್ಯೂಟರ್ ಬಳಕೆ ಹಾಗೂ ಅದರಿಂದ ಪುಸ್ತಕ ಪಬ್ಲಿಷಿಂಗ್, ಅಡುಗೆ... ಹೀಗೆ ಹತ್ತು-ಹಲವು ಅವರ ಆಸಕ್ತಿ, ಅಭಿರುಚಿಗಳಾಗಿದ್ದವು. ಹಾಗಾಗಿ “ತೇಜಸ್ವಿ” ಎಂದರೆ ಒಂದು ವಿಸ್ಮಯ, ನಿಗೂಢ, ಮಾಯಾಲೋಕ!
* * *